Thursday 16 May 2013

ಶರಧಿಯ ಮಡಿಲಲ್ಲಿ


ನಿಶ್ಶಬ್ಧತೆಯನ್ನು ಕೆಣಕುವ ಶರಧಿಯ ಭೋರ್ಗರೆತಸುಂದರ ಕ್ಷಿತಿಜದಾಚೆಗಿನ ವಿಸ್ಮಯವನ್ನು ಕಾಣುವ ಉತ್ಸುಕತೆಆಗಸವೂಸಾಗರವೂ ಸೇರಿದಂತೆನಿಸುವ ಮನದಲ್ಲಿ ಒಂದು ರೀತಿಯ ಕುತೂಹಲವನ್ನು ಕೆರಳಿಸುವ ದಿಗಂತದ ದೃಶ್ಯಮೋಡದ ಮರೆಯಲ್ಲಿ ಬೆಳಕಿನಾಟವಾಡುತ್ತಕೊನೆಗೆ ಕಾರ್ಮೋಡದಲ್ಲಿ ಕಾಣೆಯಾಗುವ ಭಾಸ್ಕರನ ನೋಟಕಣ್ಣಿಗೆ ದೃಶ್ಯಕಾಣಿಕೆಯನ್ನಿತ್ತಂತಿತ್ತು

ಕೃಷ್ಣಮೇಘಗಳ ಮಧ್ಯೆ ಮರೆಯಾಗಿದ್ದ ದಿನಕರನ್ನು ಕಾಣಲಾರದೆಕಣ್ಣದುರಿಗಿದ್ದ ಸಾಗರನತ್ತ ಕಣ್ಣುಹಾಯಿಸಿದಾಗ ಸುಂದರ ನಿಸರ್ಗದ ಸೌಂದರ್ಯತೆಗೆ ಸಾಟಿಯೇ ಇಲ್ಲದ ಸೌಂದರ್ಯವನ್ನು ಕಂಡು ಮನವು ಮನಃಪೂರ್ತಿಯಾಗಿ ಮನಸೋತಿತು. "ರವಿ ಕಾಣದ್ದನ್ನು ಕವಿ ಕಂಡಎಂದು ಹೇಳಿರುವುದು ಇದಕ್ಕೇ ಇರಬೇಕೆನಿಸಿತುಏಕೆಂದರೆ ಮೋಡದಲ್ಲಿ ಮರೆಯಾಗಿದ್ದ ರವಿ ಕಾಣಲಾರದ ದೃಶ್ಯವನ್ನು ನಾನು ಕಾಣುತ್ತಲಿದ್ದೆ!

ಕಣ್ಣೋಟಕ್ಕೆ ನಿಲುಕದ ಶರಧಿಯ ಬೃಹದ್ಗಾತ್ರಅದರೆದುರು ಯಕ್ಕಶ್ಚಿತ್ ಮಾನವನ ಯಕ್ಕಶ್ಚಿತ್ ಗಾತ್ರವನ್ನು ಹೋಲಿಸುವುದಂತೂ ಮೌಢ್ಯತೆಯೇ ಸರಿ!

ಸಮುದ್ರದ ದಡದಲ್ಲಿ ಮರಳಿನ ಮೇಲೆ ನಿಂತಿದ್ದ ನನ್ನೆದುರಿಗೆ ಸಾವಿರಾರು ಅಲೆಗಳು ಬಂದು ಹೋಗಿದ್ದವು.... ಇನ್ನೂ ಹಲವಾರು ಬರುತ್ತಲಿದ್ದವುಪೃಕ್ರತಿಯ  ಆಟಕ್ಕೆ ಕೊನೆಯೂ ಇಲ್ಲ ಬಿಡಿಆದರೆ  ಅಲೆಗಳು ಬಂದು ಸುಮ್ಮನೆ ಹೋಗುತ್ತಿರಲಿಲ್ಲ........... ಕಾಲ್ಕೆಳಗಿನ ಮರಳನ್ನು ಒಯ್ಯುತ್ತಾಮತ್ತೆ ಕಾಲ ಮೇಲೆ ಎರಚುತ್ತಾಕಾಲನ್ನು ಮರಳಿನಲ್ಲಿ ಹುಗಿಸುತ್ತಾಸಾಗರದೆದುರು ತನ್ನ ಗಾತ್ರ ಹೋಲಿಸ ಹೊರಟವನನ್ನು ಇನ್ನೂ ಕುಬ್ಜನಾಗಿ ತೋರ್ಪಡುವಂತೆ ಮಾಡಿ ಅಣಕಿಸುತ್ತಿದ್ದವು!

ಒಮ್ಮೆ ಕಣ್ಣುಹಾಯಿಸಿ ಮುಗಿಯುವಂಥ ದೃಶ್ಯವಲ್ಲ ಅದು;  ಮತ್ತೊಮ್ಮೆಮಗದೊಮ್ಮೆ ನೋಡಬೇಕೆನಿಸುವ ದೃಶ್ಯಜೇವಮಾನವಿಡೀ ನೋಡಿದರೂ ಮುಗಿಯದಂತಹ ಜಲರಾಶಿ.

ಅದೇ ಹೊತ್ತಿಗೆ ಮೋಡಗಳನ್ನು ಸರಿಸುತ್ತಲೂಸಾವಕಾಶವಾಗಿ ಕೆಳಗಿಳಿಯುತ್ತಶೇಖರನಿಗೆ ದಾರಿಯನ್ನು ಬಿಟ್ಟು ಕಾಣೆಯಾಗುವ ಕೃತ್ಯದಲ್ಲಿ ಯಶಸ್ವಿಯಾಗಲು ಪಶ್ಚಮದತ್ತ ಹೊರಟಿದ್ದತನ್ನ ಪ್ರಖರ ಕಿರಣಗಳನ್ನು ತಿಳಿಗೊಳಿಸಿಕೇಸರಿ ಬಣ್ಣಕ್ಕೆ ತಿರುಗುತ್ತಿದ್ದ ತಿಗ್ಮಕರನ ಅತಿಸುಂದರ ದೃಶ್ಯಕಾವ್ಯ ಮನದಲ್ಲಿ ಸುಮಧುರ ಭಾವರಾಗಗಳನ್ನು ಹುಟ್ಟಿಹಾಕುತ್ತಲಿತ್ತು.

"ಸೌಂದರ್ಯವೇ ನಿಸರ್ಗನಿಸರ್ಗವೇ ಸೌಂದರ್ಯ,

ಹಾಗಾಗಿ,


ಸೌಂದರ್ಯದ ಸೌಂದರ್ಯಕ್ಕೆ ಸೌಂದರ್ಯವೇ ಸಾಟಿ"

                                                                                                                                          -  ಪ್ರಣವ